ಮೆಕೆನ್ಜಿ, ಹೆನ್ರಿ
1745-1831. ಸ್ಕಾಟಿಷ್ ಬರೆಹಗಾರ. ಶ್ರೇಷ್ಠ ಕಾದಂಬರಿಕಾರನಾದ ಸರ್‍ವಾಲ್ಟರ್ ಸ್ಕಾಟನ ಸಮಕಾಲೀನ. ಈತ ಅನೇಕ ಕತೆಗಳನ್ನೂ ನಾಟಕಗಳನ್ನೂ ಬರೆದಿದ್ದಾನೆ. ಇವನ ಕತೆಗಳಲ್ಲಿ ಲೋಕಾನುಭವದ ನಿರೂಪಣೆ ಕಡಿಮೆ; ಗ್ರಂಥಜ್ಞಾನದ ಅನುಕರಣೆ ಹೆಚ್ಚು. ಇವನ ಬರೆಹದ ಶೈಲಿ ಓದುಗನಿಗೆ ಅಸ್ವಾಭಾವಿಕವೆನಿಸಿದರೂ ಲಲಿತವಾಗಿಯೂ ಸರಳವಾಗಿಯೂ ಇದೆ. ದಿ ಮ್ಯಾನ್ ಆಫ್ ಫೀಲಿಂಗ್, ದಿ ಮ್ಯಾನ್ ಆಫ್ ದಿ ವಲ್ರ್ಡ್-ಇವು ಇವನ ಜನಪ್ರಿಯ ಕೃತಿಗಳು. ದಿ ಸ್ಪ್ಯಾನಿಷ್ ಫಾದರ್, ದಿ ಪ್ರಿನ್ಸ್ ಆಫ್ ಟೂನಿಸ್, ದಿ ಶಿಪ್‍ರೆಕ್-ಎಂಬ ನಾಟಕಗಳು ಇವನಿಗೆ ಅಪಾರ ಯಶಸ್ಸನ್ನು ತಂದುಕೊಟ್ಟವು.						
(ಸಿ.ಕೆ.ವೈ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ